About us

ದೇವರ ನಾಮಕ್ಕೆ ಸ್ತೊತ್ರ

ಪ್ರಿಯರೇ, ಪಾಸ್ಟರ್.ಪಿ.ತೇಜಸ್ಸ್ ಮತ್ತು ಪಾಸ್ಟರ್.ಎ.ಪರಿಮಳ ಎನ್ನುವ ನಾವು ದೇವರ ಕೃಪೆಯಿಂದ ``ಚಿದ್ಕೇನು ಪ್ರಾರ್ಥನಾ ಮಂದಿರ` ಎನ್ನುವ ಸಭೆಯನ್ನು ಕ್ರಿ.ಶ. 2008 ಮಾರ್ಚ್ 15ರಂದು ಶುರುಮಾಡಲಾಗಿದೆ.

ನಾವು ರಕ್ಷಣೆಯನ್ನು ಹೊಂದಿದ ಸಭೆಯಲ್ಲಿ ಸೇವೆಯನ್ನು ಕೇಳಿದಾಗ ಅವರು ಹೆಣ್ಣು ಮಕ್ಕಳಾದ ನಮಗೆ ಸೇವೆಯನ್ನು ಕೊಡಲು ನಿರಾಕರಿಸಿದರು. ಮದುವೆಯಾದರೆ ಮಾತ್ರ ಕೊಡುತ್ತೇವೆ ಅಂದರು. ಆದರೆ ನಾವಿಬ್ಬರು ದರ್ಶನದ ಪ್ರಕಾರ ಸೇವೆಗೆಂದು ಪ್ರತಿಷ್ಟಿತರಾಗಿದ್ದೆವು. ಕರ್ತನಿಂದ ನೇರವಾಗಿ ``ಮದುವೆಯಾಗದೆ ಸೇವೆಮಾಡಬೇಕೆಂದು`` ಶಬ್ಧವನ್ನು ಕೇಳಿದ್ದೆವು. ಆದರೆ ನಮ್ಮನ್ನು ಪ್ರೋತ್ಸಾಹಿಸಿ ಸೇವೆಕೊಡುವವರು ನಮಗೆ ಯಾರೂ ಸಿಗಲಿಲ್ಲ. ನಂತರ ಸೇವೆಯ ಮನೋಭಾವ ನಮ್ಮಲ್ಲಿ ಬಹಳವಾಗಿ ಇದ್ದುದ್ದರಿಂದ ಪವಿತ್ರಾತ್ಮನು ನಮ್ಮನ್ನು ಪ್ರೇರೇಪಿಸಿದ ಕಾರಣದಿಂದ, 7ದಿನಗಳ ಕಾಲ ಉಪವಾಸವಿದ್ದು ಕರ್ತನ ಆಜ್ಞೆಯ ಮೇರೆಗೆ ಸಭೆಯನ್ನು ಶುರುಮಾಡಿದೆವು. ಆದರೆ ಈ ಲೋಕದಲ್ಲಿ ಹೆಣ್ಣುಮಕ್ಕಳು ಸಭೆ ನಡೆಸುವುದು ತಪ್ಪು ಎನ್ನುವ ತಪ್ಪಾದ ಅಭಿಪ್ರಾಯದೊಟ್ಟಿಗೆ ಮುಂದೆಹೋಗುತ್ತಿದೆ. ಆದರೆ ದೇವರು ಹೆಣ್ಣು ಮಕ್ಕಳಾದ ನಮ್ಮನ್ನು ಕರ್ತನ ರಾಜ್ಯಕ್ಕೋಸ್ಕರ ಸಭೆಯನ್ನು ಬೆಳೆಸುವ ಆತ್ಮಶಕ್ತಿಯನ್ನು ಅನುಗ್ರಹಿಸಿದ್ದಾನೆ. ಸಭೆಯನ್ನು ಸ್ಥಾಪಿಸಿದ ಸಮಯದಿಂದ ಅನೇಕ ಸೇವಕರುಗಳು ನಮ್ಮನ್ನು ಚುಚ್ಚಿ ಮಾತಾಡಿದರೂ ಸೇವೆಯನ್ನು ತಡೆಯಲು ಸಾಧ್ಯವಾದಷ್ಟು ಮಟ್ಟಿಗೆ ಸಭೆಯನ್ನು ನಿಲ್ಲಿಸುವ ಪ್ರಯಾಸಪಟ್ಟರು. ಆದರೆ ಗಮಲಿಯೇಲನ ಪ್ರವಾದನೆಯ ಪ್ರಕಾರವಾಗಿ ``ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವುದು, ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವುದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡಿರಿ ಎಂದು ಹೇಳಿದೆನು.`` (ಅ.ಕೃ. 5:39) ಎನ್ನುವ ದೇವರ ಮಾತಿನ ಪ್ರಕಾರ ನಮ್ಮನ್ನು ಈ ಭಾರತ ದೇಶದಲ್ಲಿ ಸಭೆಯನ್ನು ಕಟ್ಟಿ ನಡೆಸಲು ಕರ್ತನು ಕೃಪೆ ನೀಡಿದ್ದಾರೆ.

``ಚಿದ್ಕೇನು ಪ್ರಾರ್ಥನಾ ಮಂದಿರ``ದ ಉದ್ದೇಶವೇನೆಂದರೆ ಅನೇಕ ನೊಂದಂತಹ ವ್ಯಕ್ತಿಗಳನ್ನು ಸಂತೈಸಿ ಅನೇಕರನ್ನು ಕರ್ತನ ರಾಜ್ಯಕ್ಕೆ ಸೇರಿಸುವುದೇ ಆಗಿದೆ. ಸಭೆ ಶುರುವಾದಂದಿನಿಂದ ಅನೇಕ ವ್ಯಕ್ತಿಗಳನ್ನು ಕರ್ತನು ಗುಣ ಪಡಿಸಿದಿದ್ದಾರೆ. ದೇವರ ರಾಜ್ಯವನ್ನು ವಿಸ್ತರಿಸುವ ಸಲುವಾಗಿ 10 ಆತ್ಮೀಕವಾದ ಪುಸ್ತಕಗಳನ್ನು ಸಭೆಯವರ ಸಹಾಯದಿಂದ ಹೊರತೆಗೆಯಲಾಗಿದೆ. ಈ ಪುಸ್ತಕಗಳನ್ನು ಕರ್ನಾಟಕದಾದ್ಯಂತ ಉಚಿತವಾಗಿ ವಿತರಿಸಲಾಗುತ್ತಿದೆ. ಮತ್ತು ಆತ್ಮೀಕವಾದ ಹಾಡುಗಳನ್ನು `ಕ್ರಿಸ್ತನ ಪರಿಮಳ ಆರಾಧನಾ ಗೀತೆಗಳು`` ಎನ್ನುವ 1-7 volume mp3 ಯನ್ನು ಬಿಡುಗಡೆಮಾಡಲಾಗಿದೆ. ಇನ್ನು ಅನೇಕ ಆತ್ಮೀಕ ಹಾಡುಗಳನ್ನು, ಪುಸ್ತಕಗಳನ್ನು ಸಹ ಹೊರತೆಗೆಯುವ ಪ್ರಯಾಸದಲ್ಲಿಯೂ ಮುಂದುವರೆಯುತ್ತಿದ್ದೇವೆ. CD ಮತ್ತು ಪುಸ್ತಕಗಳನ್ನು ಸಹ ವಿತರಣೆಮಾಡಲಾಗಿದೆ. ಮತ್ತು YOUTUBE CHANNEL NAME: “CPM TEJUS PARIMALA” ನಲ್ಲಿ ಕನ್ನಡ ಜನರ ಆತ್ಮೀಕ ಬೆಳವಣಿಗೆಯನ್ನು ಪೋತ್ಸಾಹಿಸುವ ಸಲುವಾಗಿ ಅನೇಕ ವಿಧವಾದ ಆತ್ಮೀಕ ಕಿರುಚಿತ್ರಗಳನ್ನು, ಆತ್ಮೀಕ ಹಾಡುಗಳನ್ನು, ಆತ್ಮೀಕ ಪ್ರಸಂಗಗಳನ್ನು, ನೃತ್ಯಗಳನ್ನೂ ಸಹ upload ಮಾಡಲಾಗಿದೆ.’

ಬಹಳ ಒಳ್ಳೇಯ ಫಲಿತಾಂಶಗಳನ್ನು ಈ ಸೇವೆಯಿಂದ ನಾವು ನೋಡುತ್ತಿದ್ದೇವೆ. ಒಂದೊಂದು ಪುಸ್ತಕವು ಮತ್ತು ಹಾಡುಗಳು ಒಂದೊಂದು ದೇವಸೇವಕರಂತೆ ಕೆಲಸ ಮಾಡುತ್ತಿದೆ. ಆತ್ಮೀಕರಿಗೆ ಆತ್ಮೀಕತೆ ಹೆಚ್ಚು ಮಾಡುತ್ತಿದೆ ಎಂದು ನಿಮಗೆ ತಿಳಯಪಡಿಸಲು ಬಹಳ ಸಂತೋಷಿಸುತ್ತಿದ್ದೇವೆ.”””’’’’’

ದೈನಂದಿನ ವಾಕ್ಯ
ನನ್ನನ್ನು ಹಿಂಬಾಸಲಿಸು ಪ್ರೀತಿಯ ದೇವರ ಮಕ್ಕಳೇ ಯೇಸುಕ್ರಿಸ್ತನು `ನನ್ನನ್ನು ಹಿಂಬಾಲಿಸು`(ಮತ್ತಾಯ 9:9) ಎಂದು ಶಿಷ್ಯರನ್ನು ಕರೆದ! ತಕ್ಷಣವೇ ಅವರು ಆತನನ್ನು ಹೇಗೆ ಹಿಂಬಾಲಿಸುವಂತಹ ಶಕ್ತಿಯನ್ನು ಹೊಂದಿದರು, ಎಂಬುದನ್ನು ಆಲೋಚಿಸುವಾಗ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಅಲ್ಲವೇ?

ಸತ್ಯವೇದದಲ್ಲಿರುವ ಕರ್ತನ ವಾಕ್ಯಗಳನ್ನಾಗಲೀ ಆತನ ಮಾತುಗಳನ್ನಾಗಲಿ ಅರ್ಥಮಾಡಿಕೊಳ್ಳಬೇಕಾದರೆ ಪ್ರಾರ್ಥನೆ ಬೇಕು. `ಯೇಸುಕ್ರಿಸ್ತನೇ ನನಗೆ ನಿನ್ನ ಮಾತುಗಳನ್ನು ಅರ್ಥಮಾಡಿಸು` ಎಂದು ಪ್ರತಿದಿನವೂ ನಾವು ಪ್ರಾರ್ಥನೆ ಮಾಡಬೇಕಾಗಿರುವುದು ಬಹು ಅವಶ್ಯವಾದುದ್ದಾಗಿದೆ. ಆತನು ನಮ್ಮನ್ನು ತನ್ನ ಮಕ್ಕಳಾಗಿ ಅಂಗೀಕರಿಸಿ ಕೊಂಡಿರುವ ಸಲುವಾಗಿ ದೇವರಮಕ್ಕಳು ಎಂದು ನಾವು ಕರೆಯಲ್ಪಟ್ಟಿದ್ದೇವೆ. ಮಕ್ಕಳಾದರೆ ಮಾತ್ರ ಸಾಕಾಗುವುದಿಲ್ಲ ಆತನ ಮತ್ತೊಂದು ಮಾತು `ನನ್ನನ್ನು ಹಿಂಬಾಲಿಸು` ಎನ್ನುವ ಶಬ್ಧವನ್ನು ಅಂಗೀಕರಿಸಬೇಕು ಏಕೆಂದರೆ ನಮ್ಮನ್ನು ತನ್ನ ಶಿಷ್ಯರನ್ನಾಗಿ ಮಾಡಿಕೊಳ್ಳಲು ಆತನಿಗೆ ಇಷ್ಟವಿದೆ. ಪ್ರೀತಿಯ ದೇವರ ಮಗುವೇ ಆತನು ನಿನ್ನನ್ನೇ ನೋಡಿ ಕರೆಯುತ್ತಿರುವುದು ಆತನನ್ನು ಹಿಂಬಾಲಿಸಲು ನಿನಗೆ ಮನಸ್ಸಿದೆಯಾ? ಹಾಗಿರುವುದಾದರೆ ಈ ಕ್ಷಣದಲ್ಲಿ ನಿನ್ನನ್ನು ಕರ್ತನ ಚಿತ್ತಕ್ಕೆ ಒಪ್ಪಿಸಿಕೊಟ್ಟು. . . . . .ಈ ಪ್ರಾರ್ಥನೆಯನ್ನು ಮನಸಾರೆ ಮಾಡು. ಪ್ರಾರ್ಥನೆ: ಪ್ರೀತಿಯ ಯೇಸುಪ್ಪಾ ನಿನ್ನ ನಾಮಕ್ಕೆ ಸ್ತೋತ್ರವಾಗಲಿ. ನಾನು ಇಷ್ಟು ದಿನ ಪ್ರೇತ್ರ ಯೋಹಾನ ಯಾಕೋಬರನ್ನು ಮಾತ್ರ ನಿನ್ನನ್ನು ಹಿಂಬಾಲಿಸಲು ಕರೆದಿದ್ದೀಯ ಎಂದು ಅರ್ಥಮಾಡಿಕೊಂಡಿದ್ದೆ. ಆದರೆ ನೀನು ನನ್ನನ್ನು ಸಹ ನಿನ್ನ ಶಿಷ್ಯನಾ/ಳಾ/ಗುವುದಕ್ಕೆ ಕರೆದಿದ್ದೀಯಾ ಎಂದು ಅರ್ಥಮಾಡಿಕೊಂಡು ನಿನ್ನನ್ನು ಹಿಂಬಾಲಿಸಲು ನನ್ನನ್ನು ಒಪ್ಪಿಸಿಕೊಟ್ಟಿದ್ದೇನೆ. ನಿನ್ನ ಚಿತ್ತದ ಪ್ರಕಾರ ನನ್ನನ್ನು ಈ ಲೋಕದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ನಂಬಿಕೆಯಿಂದ ಪ್ರಾರ್ಥಿಸಿ ಬೇಡಿಹೊಂದಿದ್ದೇನೆ ಜೀವವುಳ್ಳ ಸ್ವರ್ಗಿಯ ತಂದೆಯೇ ಆಮೆನ್.

Contact

Get In Touch With Us

Chidkenu Prarthana Mandhira

Address

#90, 1 Main Road
Subbanna Garden Vijayanagar Bangalore-560 040

Call Us

9900241593
9880245222

Email Us

chidkenuprarthanamandhira@gmail.com

Working Hours

Mon - Fri: 9AM to 5PM
Sunday: 8AM to 1PM