Daily Devotional

ದೈನಂದಿನ ವಾಕ್ಯ01.10.2021

ನನ್ನನ್ನು ಹಿಂಬಾಸಲಿಸು
ಪ್ರೀತಿಯ ದೇವರ ಮಕ್ಕಳೇ ಯೇಸುಕ್ರಿಸ್ತನು `ನನ್ನನ್ನು ಹಿಂಬಾಲಿಸು`(ಮತ್ತಾಯ 9:9) ಎಂದು ಶಿಷ್ಯರನ್ನು ಕರೆದ! ತಕ್ಷಣವೇ ಅವರು ಆತನನ್ನು ಹೇಗೆ ಹಿಂಬಾಲಿಸುವಂತಹ ಶಕ್ತಿಯನ್ನು ಹೊಂದಿದರು, ಎಂಬುದನ್ನು ಆಲೋಚಿಸುವಾಗ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಅಲ್ಲವೇ?

ಸತ್ಯವೇದದಲ್ಲಿರುವ ಕರ್ತನ ವಾಕ್ಯಗಳನ್ನಾಗಲೀ ಆತನ ಮಾತುಗಳನ್ನಾಗಲಿ ಅರ್ಥಮಾಡಿಕೊಳ್ಳಬೇಕಾದರೆ ಪ್ರಾರ್ಥನೆ ಬೇಕು. `ಯೇಸುಕ್ರಿಸ್ತನೇ ನನಗೆ ನಿನ್ನ ಮಾತುಗಳನ್ನು ಅರ್ಥಮಾಡಿಸು` ಎಂದು ಪ್ರತಿದಿನವೂ ನಾವು ಪ್ರಾರ್ಥನೆ ಮಾಡಬೇಕಾಗಿರುವುದು ಬಹು ಅವಶ್ಯವಾದುದ್ದಾಗಿದೆ.

ಆತನು ನಮ್ಮನ್ನು ತನ್ನ ಮಕ್ಕಳಾಗಿ ಅಂಗೀಕರಿಸಿ ಕೊಂಡಿರುವ ಸಲುವಾಗಿ ದೇವರಮಕ್ಕಳು ಎಂದು ನಾವು ಕರೆಯಲ್ಪಟ್ಟಿದ್ದೇವೆ. ಮಕ್ಕಳಾದರೆ ಮಾತ್ರ ಸಾಕಾಗುವುದಿಲ್ಲ ಆತನ ಮತ್ತೊಂದು ಮಾತು `ನನ್ನನ್ನು ಹಿಂಬಾಲಿಸು` ಎನ್ನುವ ಶಬ್ಧವನ್ನು ಅಂಗೀಕರಿಸಬೇಕು ಏಕೆಂದರೆ ನಮ್ಮನ್ನು ತನ್ನ ಶಿಷ್ಯರನ್ನಾಗಿ ಮಾಡಿಕೊಳ್ಳಲು ಆತನಿಗೆ ಇಷ್ಟವಿದೆ.

ಪ್ರೀತಿಯ ದೇವರ ಮಗುವೇ ಆತನು ನಿನ್ನನ್ನೇ ನೋಡಿ ಕರೆಯುತ್ತಿರುವುದು ಆತನನ್ನು ಹಿಂಬಾಲಿಸಲು ನಿನಗೆ ಮನಸ್ಸಿದೆಯಾ? ಹಾಗಿರುವುದಾದರೆ ಈ ಕ್ಷಣದಲ್ಲಿ ನಿನ್ನನ್ನು ಕರ್ತನ ಚಿತ್ತಕ್ಕೆ ಒಪ್ಪಿಸಿಕೊಟ್ಟು. . . . . .ಈ ಪ್ರಾರ್ಥನೆಯನ್ನು ಮನಸಾರೆ ಮಾಡು. ಪ್ರಾರ್ಥನೆ: ಪ್ರೀತಿಯ ಯೇಸುಪ್ಪಾ ನಿನ್ನ ನಾಮಕ್ಕೆ ಸ್ತೋತ್ರವಾಗಲಿ. ನಾನು ಇಷ್ಟು ದಿನ ಪ್ರೇತ್ರ ಯೋಹಾನ ಯಾಕೋಬರನ್ನು ಮಾತ್ರ ನಿನ್ನನ್ನು ಹಿಂಬಾಲಿಸಲು ಕರೆದಿದ್ದೀಯ ಎಂದು ಅರ್ಥಮಾಡಿಕೊಂಡಿದ್ದೆ. ಆದರೆ ನೀನು ನನ್ನನ್ನು ಸಹ ನಿನ್ನ ಶಿಷ್ಯನಾ/ಳಾ/ಗುವುದಕ್ಕೆ ಕರೆದಿದ್ದೀಯಾ ಎಂದು ಅರ್ಥಮಾಡಿಕೊಂಡು ನಿನ್ನನ್ನು ಹಿಂಬಾಲಿಸಲು ನನ್ನನ್ನು ಒಪ್ಪಿಸಿಕೊಟ್ಟಿದ್ದೇನೆ. ನಿನ್ನ ಚಿತ್ತದ ಪ್ರಕಾರ ನನ್ನನ್ನು ಈ ಲೋಕದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ನಂಬಿಕೆಯಿಂದ ಪ್ರಾರ್ಥಿಸಿ ಬೇಡಿಹೊಂದಿದ್ದೇನೆ ಜೀವವುಳ್ಳ ಸ್ವರ್ಗಿಯ ತಂದೆಯೇ ಆಮೆನ್.

Article 12

test